ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಪ್ರೀತಿ ಗೀತಿ ಇತ್ಯಾದಿ
“ಅಷ್ಟಕ್ಕೂ ನನ್ನನ್ನು ಮದುವೆ ಆಗಲು ನಿನಗೆ ಇರುವ ಯೋಗ್ಯತೆ ಆದರೂ ಏನು? ನಿನ್ನ ಮದುವೆ ಆದರೆ ನಾಳೆ ಮನೆಯ ಬಾಡಿಗೆ, ಹಾಲು, ದಿನಸಿಗಳಿಗೆ ತಲೆ ಕೆಡಿಸಿಕೊಳ್ಳಬೇಕು. ತಿಂಗಳ ಕೊನೆಯಲ್ಲಿ ಖಾಲಿ ಕೈಯಲ್ಲಿ ಜೀವನ ಮಾಡಿಸುತ್ತೀಯ. ಒಳ್ಳೆಯ ಬಟ್ಟೆ ತೆಗೆದುಕೊಳ್ಳುವುದು ಇರಲಿ, ತಿನ್ನುವುದಕ್ಕೂ ಲೆಕ್ಕಾಚಾರ ಹಾಕುತ್ತಿಯ. ಇನ್ನು ಮಕ್ಕಳಾದರೆ ಅವರಿಗೆ ಒಳ್ಳೆ ಬಟ್ಟೆ, ಶಿಕ್ಷಣ ಕೊಡಿಸುವುದಂತು ದೂರದ ಮಾತು. ಹೇಳು, ಯಾವ ನಂಬಿಕೆ ಇಟ್ಟಕೊಂಡು ನಿನ್ನ ಜೊತೆ ಬರಬೇಕು ನಾನು?”. ಎಂದು...
-
ಮಂದಹಾಸ
ಅಲಂಕೃತ ಬಳಿ ಬಂದು ಎದೆ ತಾಕಿ ನಿಲ್ಲು ಇಲ್ಲದಂತೆ ಯಾವುದೇ ಅಂತರ ಭಾವನೆಗಳಲಿ ಬೆರೆತ ನೀನು ನನ್ನ ನೆನಪುಗಳಿಲಿ ಇರುವೆ ನಿರಂತರ, ಜೊತೆಯಾಗಿ ನಾವು ಸಾಗುತಿರೆ ದೂರದ ಆ ಗುರಿಯೂ ಈಗ ಹತ್ತಿರವಾಗಿದೆ ನಿನ್ನ ಗುಣದಿಂದ ಅಲಂಕೃತವಾದ ನನ್ನ ಬದುಕಿನ ಧ್ಯೇಯವೀಗ ಬಹಳ ಎತ್ತರವಾಗಿದೆ ಮಂದಹಾಸ ಇರುಳ ಬೆಳಕಲ್ಲಿ ತಂಪೆರಸುವ ಚೆಲುವು ಚಂದ್ರನಿಗೇ ಸಾಟಿ ಅವಳ ಸುಂದರ ಮೊಗವು, ಮಳೆಯಲ್ಲಿ ಮಿಂದು ಬೀಗುವ ಅರಳಿದ ಹೂವಂಥ ಮೊಗವು, ಸದಾಕಾಲ ಜೊತೆಗೆ...
-
ಜೀವನದಿ
ಯುಗಗಳ ಹಿಂದೆ ಬೆಂಕಿ ಉಂಡೆಯಂಥಹ ಭೂಮಿಯೂ ತನ್ನ ಮೇಲ್ಮೈ ಬೆಂಕಿಯೆಲ್ಲ ಉರಿದ ನಂತರ ಸಾವಿರಾರು ವರ್ಷಗಳ ಕಾಲ ಮಳೆ ರೂಪದಲ್ಲಿ ಬಿದ್ದ ನೀರಿಂದ ತಣಿದು ಇಂದು ನಾವು ನೋಡುತ್ತಿರುವ ಜಗತ್ತಾಗಿದೆ. ಆಗ ಸಾವಿರಾರು ವರ್ಷಗಳು ಬಿದ್ದ ಮಳೆಯಿಂದ ಈಗ ನಾವು ನೋಡುತ್ತಿರುವ ಸಾಗರ, ನದಿಗಳು ಹುಟ್ಟಿಕೊಂಡವು. ಹೀಗೆ ರೂಪುಗೊಂಡ ನೀರಿನ ಜೀವ ನೀಡುವ ಅಂಶದಿಂದ ಎಲ್ಲ ರೀತಿಯ ಜೀವಗಳು ಬೆಳೆದವು. ನಾವು ಸಹ ಬೆಳೆದದ್ದು ಇದೇ ರೀತಿಯಲ್ಲೇ. ನದಿ, ಸಾಗರ,...
-
ಜಗದೋಟ
ಜಗವೇ ಹಣದ ಹಿಂದೆ ಓಡುತಿರುವಾಗ ನದಿ ಇದು ಓಡಿದೆ ನೋಡು ಸಾಗರವ ಸೇರಿ ಹಿರಿದಾಗಲು, ಓಡಿದೆ ತಾನು ಜಗತ್ತನ್ನೇ ನೋಡಲು. ಜಗವೇ ಹಣದ ಹಿಂದೆ ಓಡುತಿರುವಾಗ ಗಾಳಿ ಇದು ಓಡಿದೆ ನೋಡು ಜಗತ್ತನ್ನೇ ಆವರಿಸಲು, ಓಡಿದೆ ತಾನು ಪ್ರತಿ ಜೀವವನ್ನು ಉಳಿಸಲು. ಜಗವೇ ಹಣದ ಹಿಂದೆ ಓಡುತಿರುವಾಗ ಬೆಳಕಿದು ಓಡಿದೆ ನೋಡು ಜಗದ ಚಿತ್ರವ ಬಿಡಿಸಲು, ಓಡಿದೆ ತಾನು ಎಲ್ಲದರ ಕಣ್ಣ ಬೆಳಗಿಸಲು. ಜಗವೇ ಹಣದ ಹಿಂದೆ ಓಡುತಿರುವಾಗ ಮನವಿದು...
-
ನಗು ಮುಖ
ನಗುತಿರುವ ಮೊಗದ ಹಿಂದೆ ಸಾಗುತಿರುವುದು ನೋವಿನ ಮೆರವಣಿಗೆ ವಿಧಿಯೇಕೆ ನಿಲ್ಲಿಸದೆ ನೀನು ನಡೆಸುತಿರುವೆ ನಿನ್ನ ಬರವಣಿಗೆ ಊಹಿಸಲೇ ಆಗದು ನಮಗೆ ಮುಂದಿನ ಹೆಜ್ಜೆಯ ಸಪ್ಪಳವ ಸ್ಬಲ್ಪವಾದರೂ ತಗ್ಗಿಸು ನಮ್ಮ ಮೇಲೆ ಆಗುವ ನಿನ್ನ ಕ್ರೂರ ಪ್ರಭಾವ ಆಗಾಗ ಬಂದು ಕಿರುಕುಳ ಕೊಟ್ಟು ಹೋಗುತ್ತಿದ್ದರೂ ನೋವು ನಗುತಲೇ ನೋವುಗಳ ಮರೆಸುತಿಹುದು ನಮ್ಮ ಮೊಗವು, ಈ ನಮ್ಮ ಮೊಗವು! – ಆದರ್ಶ