• ಪ್ರೀತಿ ಬಂದಿತ್ತೆ

    ಹೂವ ಚೆಲ್ಲಿ, ತಿಲಕವಿಟ್ಟು, ಆರತಿ ಮಾಡಿ ಬಾ ಎಂದಾಗ ಪ್ರೀತಿ ಬಂದಿತ್ತೆ? ಒಣಗಿದ ನೆಲದ ಮೇಲೆ ಬೀಸುವ ಗಾಳಿಯು ಮುಂಗಾರನ್ನು ಎಂದಾದರೂ ತಂದಿತ್ತೆ? ಬೇಗೆಯಲ್ಲಿ ಭಾವನೆ ಕರಗಬೇಕು, ಆವಿಯಾಗಿ ಮನಮುಗಿಲ ಮುಟ್ಟಬೇಕು; ತಡೆಗಟ್ಟಿ ಹಿಡಿದ ಕಪ್ಪಾದ ಮುಗಿಲೇ ಮಳೆಯಾಗಿ ಸುರಿವುದು, ಗುಣಗಳ ಅರಿತ ಸೊಂಪಾದ ಮನದಲ್ಲೇ ಪ್ರೀತಿ ಚಿಗುರುವುದು! ಮದುವೆ ಆಗಿ ಬಹಳಷ್ಟು ವರುಷ ಜೊತೆಗಿದ್ದೂ ಸಹ ಒಬ್ಬರೊನ್ನೊಬ್ಬರ ಅರಿಯದೆ, ಕಷ್ಟ ಪಟ್ಟು ಜೊತೆಗಿರುವ ಹಾಗೆ ಇದ್ದವರ ನೋಡಿದಾಗ ಈ...


  • ಕಗ್ಗತ್ತಲು

    ಬೆಳಕನು ಆವರಿಸುವ ಕಗ್ಗತ್ತಲು, ಕರೆದುಕೊಂಡು ಸಾಗಿದೆ ಕಾಣದ ಹಾದಿಯಲಿ, ಇಂದು ನಮ್ಮ ಗುರಿಯೇ ಬದಲು! ಶುರುವಾದ ದಾರಿಯೂ ಈಗ ಇರದಾಗಿದೆ, ಆ ದಾರಿಗೂ ಏರಿತೇ ಅಮಲು? ನಡುವಾದ ದ್ವೀಪದಲ್ಲಿ ನಿಂತು ನೋಡುತಿರೆ ಸುತ್ತಲೂ ಆವರಿಸಿದೆ ಭೀಕರ ಅಲೆಗಳ ನರ್ತನ ಕಾಲಿಡಲು ಆಗುವುದೇ? ಈಜಲು ಇಳಿಯಬಹುದೇ? ತೇಲುವುದೇ ಈ ಸಣ್ಣದಾದ ಜೀವನ? ಯುಗಗಳಿಂದ ಕತ್ತಲೆಯಲ್ಲಿ ಮರೆಯಾದವು ಅದೆಷ್ಟೋ ಬದುಕುಗಳು, ಕಾಣದ ಹಾದಿಯ ಕಟುವಾದ ಪಯಣದಲಿ ಕಣ್ಮುಚ್ಚಿದವು ಬೆಳಕೇ ಕಾಣದ ಕಣ್ಣುಗಳು ಸೋತಿದೆ...


  • ಎಂತ ಸಾವ್ ಮರ್ರೆ

    ವರ್ಷಕ್ಕೊಮ್ಮೆ ಬರುವ ಬಸ್ರೂರು ಜಾತ್ರೆ. ಆ ದಿನ ಬೆಳಿಗ್ಗೆ ಸ್ನೇಹಿತರ ಜೊತೆ ಮನೆ ಬಿಟ್ಟರೆ ರಾತ್ರಿ ಬರುತ್ತಿದ್ದಿದ್ದು ಎಷ್ಟೊತ್ತಿಗೋ ಏನೊ. ಅವತ್ತೂ ಕೂಡ ಬೆಳಗ್ಗೆ ಸ್ನೇಹಿತನ ಜೊತೆ ಜಾತ್ರೆಗೆ ಹೋದೆ. ಜಾತ್ರೆಯ ಸ್ಥಳಕ್ಕೆ ಹೋಗುವಾಗ ಮೊದಲು ಸಿಗುವುದೇ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಎಲ್ಲರೂ ಒಳಗೆ ಹೋಗಿ ಪೂಜೆ ಮಾಡಿಸಿ ತಮ್ಮ ಕೋರಿಕೆಗಳನ್ನು ಕೇಳಿಕೊಂಡರೆ ನಾವು ಆಚೆನೇ ನಿಂತುಕೊಂಡು ಎರಡೂ ಕೈ ಮೇಲೆತ್ತಿ ಮುಗಿದು “ದೇವರೆ, ನಿನ್ನ ಸಹವಾಸವೇ ಬೇಡ ನಂಗೆ....


  • ಐದು ನಿಮಿಷ

    ಹಸಿದ ಹೊಟ್ಟೆಗೆ ಅನ್ನವೇ ದೇವರು. ಪ್ರಪಂಚದ ಪ್ರತಿಯೊಂದು ಅಣುವೂ ಸಹ ತನ್ನ ಹಸಿವನ್ನು ನೀಗಿಸುವ ಸಲುವಾಗಿಯೇ ಎಲ್ಲ ಚಲನವಲನಗಳ ನಡೆಸುತ್ತಿವೆ. ದಾಸರು ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ಹೇಳಿದ್ದಾರೆ, ಅವರ ಮಾತಂತೆ ನಡೆಯುವ ನಮ್ಮ ಗೆಳೆಯರ ಸಣ್ಣ ಬಳಗದ ಹುಡುಗರು ಆಗಾಗ ದೇವಸ್ಥಾನಗಳಿಗೆ ಹೋದರೆ, ಮೊದಲು ಪ್ರಸಾದದ ಸುಳಿವನ್ನು ಹುಡುಕುತ್ತೇವೆ. ಕರ್ನಾಟಕದಲ್ಲಿ ಎಷ್ಟೋ ದೇವಸ್ಥಾನಗಳಲ್ಲಿ ದೇವರ ನೋಡಲು ಬಂದ ಜನರಿಗೆ ಊಟದ ವ್ಯವಸ್ಥೆ ಮಾಡುವುದು ವಿಶೇಷ. ಧರ್ಮಸ್ಥಳ, ಶೃಂಗೇರಿ, ಹೊರನಾಡು,...


  • ಒಂದು ಹೆಜ್ಜೆ

    ಒಂದು ಹೆಜ್ಜೆ ನನ್ನೆಡೆಗೆ ನೀನಿಟ್ಟರೆ ನಿನಗಾಗೆ ಎರಡು ಹೆಜ್ಜೆಯ ನಾ ಇಡುವೆ, ಜೊತೆಯಲ್ಲಿ ಬಾ ಎಂದು ಕರೆಯದಿದ್ದರೂ ನಿನ್ನೊಡನೆ ಅನುಗಾಲ ನಾನಿರುವೆ; ಗಾಳಿ-ಮೋಡವು ಎಲ್ಲವ ಮೀರಿ ಹಾರಿ ಬೀಗಿದರೇನಂತೆ, ನಮ್ಮಯ ಸ್ನೇಹ ಹಾರುವುದು ನೋಡು ಗಾಳಿಯ ಹಿಡಿತಕೂ ಬಾರದಂತೆ; ಒಂದು ಸಜ್ಞೆ ನೀ ಕೊಟ್ಟರೆ ನನಗೆ, ಬರುವೆನು ಎಲ್ಲವ ತೊರೆದು, ಒಂದು ಹೆಜ್ಜೆ ನನ್ನೆಡೆಗೆ ನೀನಿಟ್ಟರೆ ನಿನಗಾಗೆ ಎರಡು ಹೆಜ್ಜೆಯ ನಾ ಇಡುವೆ, ಎಲ್ಲ ಅನುಮಾನಗಳ ಮುರಿದು! -ಆದರ್ಶ