• ಸುಖಾಂತ್ಯ

    ಸುಖಾಂತ್ಯ ಎಂಬುದು ಸಾವು ಒಂದೆ, ಹೊಗೆಯನ್ನು ಹಾಕಿದಾಗ ಮನೆಯ ಮುಂದೆ, ಅಡೆತಡೆಗಳೆಲ್ಲ ಮೀರಿ ಈ ಜಗವನು ನೀ ದಾಟು, ಮೆರವಣಿಗೆಯಲಿ ಬೀಳುತ್ತಿರಲಿ ತಮಟೆಯ ಏಟು, ಬದುಕಿನ ಆಚೆ ಎಲ್ಲೋ ಇರುವುದು ಸ್ವರ್ಗದ ಗುರುತು, ಅದನ್ನ ಕಂಡು ಅನುಭವಿಸಿದವರು ಯಾರು ಸತ್ತವರ ಹೊರತು, ಎಲ್ಲ ಸಂಬಂಧಗಳ ಋಣವು ಮುಗಿದಿದೆ ಇನ್ನು, ಕೂಡಿಟ್ಟಿದ್ದೆಲ್ಲವ ಬಿಟ್ಟು ಜೊತೆಗೆ ಉಳಿದಿರುವುದು ಈ ನೆಲದ ಮಣ್ಣು, ಸುಖಾಂತ್ಯ ಎಂಬುದು ಸಾವು ಒಂದೆ, ಜನರೆಲ್ಲ ಕುಣಿಯುತ್ತಿರಲು ನಿನ್ನ ಕೊನೆಯ...


  • ಪೋಲಿ ಇವನು

    ತುಂಬ ಒಳ್ಳೆಯವನಾಗಿದ್ದು ಸಾಕಾಗಿದೆ ಮನಕೆ ನಿನ್ನೊಂದಿಗೆ ಇನ್ಮೇಲೆ ಪೋಲಿಯಾಗುವ ಬಯಕೆ! ಒಂಟಿಯಾಗಿ ಕಾಡಲ್ಲಿ ಅಲೆಯುವ ಬಾರೆ, ನಮ್ಮನ್ನು ಇನ್ನು ತಡೆಯೋರು ಯಾರೆ? ದೂರದಿ ನಿಂತು ಮಾತಾಡುವುದು ಯಾಕೆ, ಇನ್ಮೇಲೆ ಹತ್ತಿರ ಕುಳಿತು ಪೋಲಿಯಾಗುವ ಬಯಕೆ! ಭಯವೇಕೆ ಈಗ ಹೇಳಾಗಿದೆ ಜಗಕೆ ಬೆರಗಾಗಿ ನಿಲ್ಲಲಿ ಜಗವು ನಮ್ಮ ತುಂಟಾಟಕೆ, ಇನ್ನೇಕೆ ತಡವು ಬಾ ನನ್ನ ಸನಿಹಕೆ ನಿನ್ನೊಂದಿಗೆ ಇನ್ಮೇಲೆ ಪೋಲಿಯಾಗುವ ಬಯಕೆ! - ಆದರ್ಶ


  • ಸನಿಹ

    ಮಾತು ಸನಿಹವೆ ನಿನಗೆ, ನಿನ್ನ ಮೌನ ಸನಿಹವೆ, ನಿನ್ನ ಮೌನದಲ್ಲಿ ಮಾತು ಕೇಳುವ ನಿನಗೆ ನಾನೇ ಸನಿಹವೆ? ದಾರಿ ಸನಿಹವೆ ನಿನಗೆ, ನಿನ್ನ ಗುರಿಯು ಸನಿಹವೆ, ನಿನ್ನ ದಾರಿಯಲ್ಲಿ ಜೊತೆಯಾಗಿ ನಿನ್ನ ಗುರಿಗೆ ಬರುವ ನಾನೇ ಸನಿಹವೆ? ಬೆಳಕು ಸನಿಹವೆ ನಿನಗೆ, ಇಲ್ಲ ಕತ್ತಲು ಸನಿಹವೆ, ಬೆಳಕಾಗಲಿ ಕತ್ತಲಾಗಲಿ ನಿನ್ನ ಕೂಡಿ ಇರುವ ನಾನೇ ಸನಿಹವೆ? ಲೋಕ ಸನಿಹವೆ ನಿನಗೆ, ಇಲ್ಲ ಏಕಾಂತ ಸನಿಹವೆ, ಏಕಾಂತದಲೂ ನಿನ್ನ ಲೋಕವಾಗಿರುವ ನಿನಗೆ...


  • ಕರಾವಳಿ ಭೋಜನ

    ನಮ್ಮ ಬ್ರಾಹ್ಮಣರ ಊಟದ ಪದ್ಧತಿಯೇ ಸ್ವಲ್ಪ ವಿಶಿಷ್ಠ. ಸಾಮಾನ್ಯವಾಗಿ ಜನರು ಮದುವೆ ಹಾಗು ಇತರೆ ಸಮಾರಂಭಗಳಲ್ಲಿ ಊಟ ಬಡಿಸುವಾಗ ಮೊದಲು ಸಿಹಿ ತಿಂಡಿಗಳ ಬಡಿಸಿ ನಂತರ ಖಾರದ ಅಡಿಗೆಗಳ ಬಡಿಸುತ್ತಾರೆ. ಕೊನೆಯಲ್ಲಿ ಅನ್ನ-ಮಜ್ಜಿಗೆ ಹಾಕಿ ಜೈ ಅನ್ನುತ್ತಾರೆ. ಆದರೆ ನಮ್ಮ ಬ್ರಾಹ್ಮಣರಲ್ಲಿ ಅಡಿಗೆ ಬಡಿಸುವ ಕ್ರಮವೇ ಬೇರೆ. ಮೊದಲು ಕೋಸಂಬರಿ, ಪಲ್ಯಗಳು, ನಂತರ ಅನ್ನ-ಸಾರು, ಅನ್ನ-ಹುಳಿ, ಅನ್ನದಿಂದ ಮಾಡಿದ ಯಾವುದಾದರೂ ಒಂದು ಅಡಿಗೆ (ತುಪ್ಪದ ಅನ್ನ{ಘೀ ರೈಸ್}, ಇತರೆ) ಇವುಗಳಾದ...


  • ಕನ್ನಡ ಜನ

    ಇತ್ತೀಚಿನ ದಿನಗಳಲ್ಲಿ ಕನ್ನಡ ಉಳಿಸಿ ಬೆಳೆಸಿ ಎಂಬ ಕೂಗು ಹೆಚ್ಚಾಗುತ್ತಿದೆ. ಜೊತೆಗೆ ಕರ್ನಾಟಕಕ್ಕೆ ಪ್ರತಿ ಬಾರಿ ಕೇಂದ್ರ ಸರಕಾರದಿಂದ ಅನ್ಯಾಯವಾಗುತ್ತಿದೆ ಎಂಬ ವಿಷಯ ಸಹ ನಮ್ಮನ್ನು ಇನ್ನೊಂದು ರೀತಿ ಬೇಸರ ಪಡಿಸುತ್ತಿರುತ್ತದೆ. ಇದಕ್ಕೆ ಅನೇಕ ಕಾರಣಗಳು ಅಂಶಗಳು ಕನ್ನಡಿಗರ ಹಿನ್ನೆಡೆಗೆ ಕಾರಣವಾಗಿರಬಹುದು. ಇವುಗಳ ಜೋತೆಗೆ ಇತಿಹಾಸ ಸಹ ನಮ್ಮ ಇಂದಿನ ಈ ಸ್ಥಿತಿಗೆ ಬಹುಮುಖ್ಯ ಕಾರಣ ಎನ್ನುವುದ ನಾವು ಮರೆಯುತ್ತಿದ್ದೇವೆ. ಇತಿಹಾಸದಲ್ಲಿ ನಡೆದ ಘಟನೆ ಪ್ರಭಾವಗಳ ಮೀರಿ ನಿಲ್ಲಲು ಕನ್ನಡಿಗರು...