• ಗಹನ

    ತುಂಬಾ ಗಹನ ನನ್ನ ಪ್ರೀತಿ, ಜಗತ್ತಿನ ಕೊನೆಯ ದಾರಿಯ ರೀತಿ. ಆಚೀಚೆ ನೋಡುವ ಅವಕಾಶವಿಲ್ಲ, ತಾನಾಗೆ ಆವರಿಸಿ ನಿಂತಿದೆ ಪ್ರೀತಿಯು ನನ್ನ ಸುತ್ತೆಲ್ಲ. ಹಾಸ್ಯವೇ ಇಲ್ಲದ ಹಸನಾದ ಪ್ರೀತಿ, ಹುರುಪಲಿ ಹರಿಯುವುದೆಂಬ ನಯವಾದ ಭೀತಿ. ಮೀಟುತಿಹುದು ಹೃದಯದಿ ಭಾವನಾ ತಂತಿ, ತುಂಬಾ ಗಹನವಾದದ್ದು ನನ್ನ ಪ್ರೀತಿ. ಅಚ್ಚರಿಯೇ ಇಲ್ಲ ಅಚ್ಚಳಿಯದಿದು, ಮನದಾವರಣದಿ ಅಂಕುಷಕ್ಕೆ ಸಿಲುಕದ್ದು. ಬದಲಾವಣೆಗೆ ಬಾರದು ನನ್ನ ಪ್ರೀತಿ, ಎಲ್ಲಕ್ಕೂ ಗಹನವಾದ ವಿಷಯದ ರೀತಿ. - ಆದರ್ಶ


  • ನೆನಪುಗಳ ಮಾತು ಮಧುರ

    ಅವಳ ನೆನಪುಗಳೆ ಹಾಗೆ, ಹುಣಸೆಹಣ್ಣಿಗೆ ಉಪ್ಪು ಹುಳಿ ಕಾರದ ಜೊತೆ ಸವಿಯಾಗಿರೋಕೆ ಬೆಲ್ಲದ ಜೊತೆ ಕುಟ್ಟುಣುಸೆ ಮಾಡಿ ತಿಂದಶ್ಟೆ ಚೆಂದ. ಮದುವೆಯಾಗಿ ವರ್ಶಗಳು ಉರುಳಿವೆ, ಅದೆಶ್ಟು ಸೊಗಸಾದ ನೆನಪುಗಳು ಬಿತ್ತಿದ್ದಾವೆ. ನೆನೆದ ಪ್ರತಿ ಕ್ಶಣ, ಮುದ, ಮುಕದ ಮೇಲೆ ನಗು. ಪಕ್ಕ ಕೂತವ್ನು ಮುಕ ನೋಡಿದ್ರೆ ಯಾವೋನೊ ತಿಕ್ಲ ಅಂದ್ಕೊಬೇಕು, ಹಾಗೆ. ನಾವಿಬ್ಬರು ಪ್ರೇಮದಿಂದ ನಂಟಸ್ತಿಕೆ ಬೆಳೆಸಿದ್ದು, ಮದುವೆಯ ಮುಂಚೆ ಈಗಿನ ಕಾಲದವರ ಹಾಗೇನೆ. ಗಂಟೆಗಟ್ಟಲೆ ಮಾತುಕತೆ, ಊರಿನ ಉಸಾಬರಿ...


  • ಸುಮಧುರ

    ನಿನ್ನ ಕಂಕಳಿನ ಬೆವರು, ನನ್ನ ಭುಜದ ಮೇಲೆ.. ಹಿಮ್ಮಡಿ ಮೇಲೆ ಮಾಡಿ, ಹೆಬ್ಬೆರಳ ಮೇಲೆ ನೀ ನಿಂತೆ, ಕಣ್ಣುಗಳು ಸೇರುವ ಮೊದಲೇ, ತುಟಿಗಳಿಗೆ ಒಂದಾಗುವ ಚಿಂತೆ.. ಅದಲು ಬದಲು ಆಗಬೇಕಿರುವುದು, ಮನಸ್ಸೊಂದೇನಾ ಸದ್ಯಕ್ಕೆ?, ಹಸಿದು ಕುಂತವನ ಮುಂದೆ ವೇದಾಂತ ಯಾತಕೆ?.. ಕಣ್ಣಲ್ಲೇ ಮಾತು ಸಾಕು, ಸ್ವಲ್ಪ ನಾವು ಮುಂದುವರೆಯಬೇಕು, ಬರೀ ಕೈ ಕಿರುಬೆರಳುಗಳಲ್ಲ, ಎರಡೆರಡು ಕೈಗಳು ಒಂದಾಗಬೇಕು..! ನಾನೇ ಸೋತೆ, ನೀನೇ ಗೆದ್ದೆ, ಕತ್ತಲಲ್ಲಿ ಮೊಳಗಲಿ ನಿನ್ನ ಕೈ ಬಳೆ,...


  • ಮಧುರ

    ಬಂದು ಹೋಗೊ ಬಂಧಗಳಲ್ಲಿ ಯಾವುದು ಚರ? ಯಾವುದು ಸ್ಥಿರ? ಜೊತೆಯಾಗಿ ಸದಾ ಬಳಿಯಿರಲು ನೀನು, ಇನ್ನು ಮುಂದೆ ಎಲ್ಲವೂ ಮಧುರ. ಬಂದು ಹೋಗೊ ಬಯಕೆಗಳಲ್ಲಿ ಯಾವುದು ಕೆಡಕು? ಯಾವುದು ಒಳಿತು? ಇನ್ನಾವ ಆಸೆಯೂ ಬೇಡ ನನಗೆ, ನೀನೆ ಬೇಕೆಂಬ ಯೋಚನೆಯ ಹೊರತು. ಬದಲಾಗುವ ಬಾಳಿನಲ್ಲಿ ಯಾವುದು ಚರ? ಯಾವುದು ಸ್ಥಿರ? ಬದಲಾಗದಿರಲಿ ನಮ್ಮ ಒಲವು, ಇನ್ನು ಮುಂದೆ ಎಲ್ಲವೂ ಮಧುರ. - ಆದರ್ಶ


  • ಹೆದ್ದಾರಿ

    ಎಷ್ಟು ನೆತ್ತರ ಹರಿದಿವೆಯೋ ಇಲ್ಲಿ, ಆದರೂ ಒಂದು ಹನಿ ನೀರು ಹನುಕಲಿಲ್ಲ ನಮ್ಮ ಕಣ್ಣಲ್ಲಿ. ಎಷ್ಟೋ ಜೀವ ಹೋಗಿದೆ ಇಲ್ಲಿ, ಸಿಕ್ಕಿಕೊಂಡು ನಮ್ಮದೇ ಗಾಲಿಯ ಅಡಿಯಲ್ಲಿ. ಹೆದ್ದಾರಿಯ ಜೀವನವಿದು, ಒಂದೇ ಕ್ಷಣದ ಬದುಕು, ಕಣ್ಣ ಮಿಟುಕಿಸುವುದರೊಳಗೆ ಆರುವುದು ಜೀವನದ ಬೆಳಕು. ಬೇಕಿರುವ ನಿಧಾನವಿಲ್ಲ ನಮ್ಮಲ್ಲಿ, ನಮ್ಮ ಗಾಲಿಗೆ ಸಿಕ್ಕಿ ಸತ್ತ ಜೀವಕೆ ಹನಿಯೊಂದು ಬರಲಿಲ್ಲ ನಮ್ಮ ಕಣ್ಣಲ್ಲಿ. ಕಪ್ಪೆ, ಕಿರುಬ, ಹಾವು, ನಾಯಿ, ಹಸು, ಹಕ್ಕಿ ಯಾವುದಕ್ಕೂ ನಾವು ನಿಲ್ಲಲಿಲ್ಲ,...