ಮಿಂಚೆಂದು ಮುಟ್ಟಲು ಹೋದೆ,
ಸಿಡಿಲೇ ಉಗುಳಿತು ಅಂಬರ.
ಸೋನೆ ಮಳೆಯೆಂದು ನೋಡಲು ಹೋದೆ,
ಮುಗಿಲೇ ಗುಡುಗಿದ ಅಬ್ಬರ.

ಹೂ ದನಿಯಲಿ ಬೆರತ ಬಿರುಸು ಮಾತು,
ಹಗುರವಲ್ಲ ಮನದುಂಬುವ ಧಾತು.
ಬೆಳಕಂತೆ ಇದು ಕಣ್ಣಿಗೂ ಚುರುಕು,
ನವಿರೇಳಿಸೊ ಈ ಹುರುಪು ಆಗಾಗ ಬೇಕು.

ಎದೆಯಲ್ಲಿ ಮೂಡಿತು ಸವಿಯಾದ ಕಂಪನ,
ಮಿಂಚಿನಿಂದಲ್ಲ ಸಿಡಿಲ ಮರಿಯ ಅಬ್ಬರ,
ಕೊರೆಯುವ ಬಯಲಲ್ಲ, ಇದು ಬೆಚ್ಚಗಿನ ಆಗರ,
ಸಂಜೆಗೆ ಕೆಂಪಾಗಿ ಮನದಣಿಸೊ ಅಂಬರ.

- ಆದರ್ಶ