ಎದೆ ಬಿರಿವ ಒಲವ ತುಂಬಿದೆ,
ಸಣ್ಣ ಮನದ ತುಂಬ,
ಒಳಗಣ್ಣ ಅಂಗಳದಿ ಈಗ,
ಬರಿ ನಿನ್ನದೇ ಬಿಂಬ.

ಮತ್ತೆ ಬೀಸಿತು ತಂಗಾಳಿ,
ನಿನ್ನ ದನಿಯ ಕೇಳಲು,
ಎಂದೊ‌ ಮರೆತ ರಾಗವೀಗ,
ಜೀವತಂತಿ ಮೀಟಲು.

ಜಗದ ಎಲ್ಲ ಪುಣ್ಯ ಒಮ್ಮೆ
ಒಲಿದು ಬಂದರೆ ಹೆಂಗೆ,
ನಸುಕಿನ ಬೆಳಕಿಗೆ ಹೂವು
ಅರಳಿ ಪರಿಮಳ ಬೀರಿದಂಗೆ,

ನೆಲ ಹಸಿರಾಗಿಸೊ ಮಳೆ ಹನಿದಿದೆ
ಸಣ್ಣ ಮನದ ತುಂಬ,
ಒಳಗಣ್ಣ ಅಂಗಳದಿ ಈಗ,
ಬರಿ ನಿನ್ನದೇ ಬಿಂಬ.

- ಆದರ್ಶ