ನಡೆಯೋದ ಕಲಿಸಿದ ಅಂಬೆಗಾಲು,
ನಿಬ್ಬೆರಗಾಗಿ ಓಡಲು ಕಾರಣ ಕಾಲು,
ಬಿದ್ದಾಗ ಏಳೋದ,
ಎದ್ದಾಗ ಬೀಳದಿರೋದ,
ಹಿಗ್ಗಿದಾಗ ನಲಿದು ಕುಣಿಯೋದೇ ಕಾಲು.

ಮುಗಿಲ ಮುಟ್ಟೋದು ಗೋಪುರವಾದರೂ,
ನೆಲೆ ನಿಲ್ಲಿಸೋ ತ್ರಾಣ ಕಂಬಗಳದು..
ಹೂವ ಮುಡಿಸೋದು ದೇವರ ಮುಡಿಗಾದರೂ,
ನಾವು ಪಾದಗಳಿಗೆ ಅಡ್ಡಬಿದ್ದು ಶರಣೆನ್ನೋದು.

ಮೂರು ಹೆಜ್ಜೆಗೆ ಮೂರು ಲೋಕ ಆಳಿದ್ದು ಕಾಲು,
ಕಾಳಗದಿ ಹಿಡಿದಾಗ ಉಳಿಸಿದ್ದು ಕಾಲು.
ಕಾಲ ತಾಕಿಸೆ ತಪ್ಪೆನ್ನಬೇಡ ನೆಗೆದು,
ಸಿರಿದೇವಿಯೇ ನಲಿವ ಕಾರಣ ಕಾಲಗುಣದ್ದು.

- ಆದರ್ಶ