ಚಳಿಗಾಲ ಹುಡುಗಿ, ಬಂದಿಲ್ಲಿ ನಿಲ್ಲು,
ಆ ದೂರ ಯಾಕೆ, ತೋರಿಸುವೆ ಕಾಮನಬಿಲ್ಲು.
ಹುಚ್ಚು ಒಲವ ಒಳಗೆಯೇ, ಇಟ್ಟಿರುವೆ ಯಾಕೆ,
ನೀ ಬಳಿಬಂದರೆ, ಹೊತ್ತಿಕೊಳ್ಳುವುದೀ ಬದುಕೆ.

ಅರೆಕಾಲ ಬಂದೋಗು, ಮಳೆಯಂತೆ ನೀನು,
ನೂರ್ಕಾಲ ನೆನಯುವೆ, ಭುವಿಯಂಗೆ ನಾನು.
ಚಳಿಗಾಲಕೆ ನೀ, ಹತ್ತಿರ ಬರಲೆಂಬ ಹರಕೆ,
ನಿನ್ನ ಸುತ್ತ ತಿರುಗಿರುವೆ, ನಾನಿಂದು ಅದಕೆ.

- ಆದರ್ಶ