ಹೊರಗೆ ನಗುವು ನುಗ್ಗಿ ಹರಿವ ಶರಾವತಿ,
ಒಳಗೆ ನೋವಿನ ಆಳ ಜೋಗದ ಗುಂಡಿ.
ಹೊರಗೆ ನಲಿವು ನೆಮ್ಮದಿಯ ನೇತ್ರಾವತಿ,
ಒಳಗೊಳಗೆ ನೋವು ಹಿಡಿದೆಳೆವ ಬಂಡಿ.

ಎಡಗಡೆಯಿಂದ ಬಾಳು ನಲಿದಾಡುವ ತುಂಗೆ,
ಬಲದಿಂದ ಬಾಳು ಬಡಿದಾಡುವ ಭದ್ರೆ,
ಎರಡೂ ಹೊಳೆ ಕೂಡುವ ತಾವು,
ದಿಕ್ಕು ಯಾವುದು ಇನ್ನು ಮುಂದಕ್ಕೆ ಬಾಳಿಗೆ?

ಮಳೆಗಾಲಕೂ ತುಂಬದ ಕಾಳಿಯ ಮಡಿಲು,
ಹೆಪ್ಪುಗಟ್ಟದೆ ಮುಂದೋಡಿದೆ ಮನದಾಳದ ಮುಗಿಲು,
ಮುಂದಾದರೂ ಕಡಲ ಸೇರುವುದೇ ಈ ಹರಿವು,
ಎಣಿಸಿದೆ ದಿನಗಳ ತೀರಲು, ಒಡಲಾಳದ ಬರವು.!!!

- ಆದರ್ಶ