ಮನವು ಯೋಚನೆಗಳಲಿ ಮಿಂದು,
ಪದಗಳನು ತಿದ್ದಿ ತೇಯ್ದು,
ಚಂದ ಮಾಡಿ ಬರೆದಾಗಲೇನೆ,
ಸೊಗಸಾದ ಕವನವೆಂದು ಹೇಳೋದು.

ಒಳಗಿನದ್ದೆಲ್ಲ ಹೊರಕ್ಕೆ ಹಾಕಿ,
ಹೊರಗಿನದ್ದೆಲ್ಲ ಒಳಕ್ಕೆ ತುಂಬಿ,
ಅರ್ಥ ನೀಡಿ ಬರೆದಾಗಲೇನೆ,
ಹಿರಿದಾಗ ಕವನವೆಂದು ಹಾಡೋದು.

ನೂರು ದಾರಿ ಸವೆಸಿ ಬಂದ,
ನೂರು ಸಾರಿ ಬದುಕಿ ತಂದ,
ತುಂಬು ಅನುಭವ ನೀಡುವುದಕೆ,
ಜೊತೆಯಾದ ಕವನವನ್ನ ಓದೋದು.

- ಆದರ್ಶ