ಬರುವ ಲಕ್ಷ್ಮಿಯ ಬೇಡವೆಂದು,
ಹೇಳಲಿ ನಾನು ಏಕೆ ಇಂದು,
ಭಾಗ್ಯವು ಬರುವುದು ಮಳೆಯಂತೆ,
ಎಲ್ಲವೂ ಹಣೆಯ ಬರಹವಂತೆ.

ಅಳುವು ನಗವು ಇಲ್ಲಿ ಹಲವು,
ಹತ್ತಿರ ಇದ್ದರೂ ಸಿಗದು ಸಾವು,
ಅನುಕ್ಷಣವೂ ಇಲ್ಲಿ ಅನುಭವವಂತೆ,
ಎಲ್ಲವೂ ಹಣೆಯ ಬರಹವಂತೆ.

ದಿಕ್ಕು ಯಾವುದು ಗುರಿಯ ಕಡೆ,
ನಿತ್ಯ ಇಲ್ಲಿ ನೂರು ತಡೆ,
ಜೀವನ ತೇಲುವುದು ಗಾಳಿ ಮೇಲಂತೆ,
ಎಲ್ಲವೂ ಹಣೆಯ ಬರಹವಂತೆ.

- ಆದರ್ಶ