ನನ್ನಿಂದ ನಾನೇ ಹೊರನಿಂತು ನನ್ನನ್ನೇ ನೋಡಿಕೊಳ್ಳುವ ಯೋಚನೆ,
ಆಗಾಗ ನನ್ನನ್ನೆ ನಾ ಅರಿಯುವಂತೆ ನೀಡುವುದು ಸೂಚನೆ.
ಹೊರಗೆಲ್ಲೂ ಜಗವಿಲ್ಲ, ನನ್ನೊಳಗೇ ಎಲ್ಲವನು ತೋರುವ ಆ ಮನನ,
ಜಗತ್ತಿಗೆ ನನ್ನನ್ನ ಪರಿಚಯಿಸುವ, ನನ್ನ ನಿಜದ ಆತ್ಮಾವಲೋಕನ.

ಭಾವನೆಗಳ ಒಡೆಯ ಈ ಮನ,
ನಿತ್ಯ ನೂತನ ಅಲೆಗಳ ಜನನ,
ಎಲ್ಲಕ್ಕೂ ಮೂಲವೊಂದೇ,
ಎಲ್ಲಕೂ ಅಂತ್ಯ ನಂದೇ,
ಎಂದು ತಿಳಿಸುವುದು ನನ್ನ ನಿಜದ ಆತ್ಮಾವಲೋಕನ.

ನನ್ನ ಕರ್ಮದ ಅರಿವು ಹೇಗೆ,
ಮನಸ್ಸು ಓಡುವುದು ತಿಳಿದಂಗೆ;
ಎಲ್ಲಕ್ಕೂ ಕಾರಣ ನಾನೇ,
ನೆಮ್ಮದಿ ಹಿಡಿತವಿದ್ದಲ್ಲೆನೇ,
ಎಂದು ತಿಳಿಸುವುದು ನನ್ನ ನಿಜದ ಆತ್ಮಾವಲೋಕನ.

ನನ್ನಿಂದ ನಾನೇ ಹೊರನಿಂತು ನನ್ನನ್ನೇ ನೋಡಿಕೊಳ್ಳುವ ಯೋಚನೆ,
ಆಗಾಗ ನನ್ನನ್ನೆ ನಾ ಅರಿಯುವಂತೆ ನೀಡುವುದು ಸೂಚನೆ.
ನನ್ನ ನಿಜದ ನನ್ನನ್ನ, ನನಗೆ ಕೊಡುವುದು ನನ್ನ ಮನನ,
ಜಗತ್ತಿಗೆ ನನ್ನನ್ನ ಪರಿಚಯಿಸುವುದು, ನನ್ನ ನಿಜದ ಆತ್ಮಾವಲೋಕನ.

- ಆದರ್ಶ