ಯಾವುದು?
by Adarsha
 ಅನ್ನ ನೀಡುವ ಕೈ ಯಾವುದೊ? 
ನನಗೆ ಪ್ರೀತಿ ನೀಡುವ ಮನಸ್ಸಾವುದೊ? 
ಅನ್ನ ಪ್ರೀತಿ ಎರಡೂ ಸಿಗುವ ಆ ಸುಂದರ ಸೊಬಗ ಬದುಕಾವುದೊ? 
 ಏರು ಯಾವುದೊ, ಇಳಿಜಾರು ಯಾವುದೊ, 
ಕಣಿವೆಯ ನಡುವಲಿ ನಡೆವಾಗ ನೆರಳಂತೆ ನಡೆವ ಆ ಧೀರತನದ ಮನಸ್ಸಾವುದೊ? 
ಸುಳ್ಳಾವುದೊ ನನ್ನ ನಿಜಯಾವುದೊ, 
ನನ್ನ ನಿಜದ ಸುಳ್ಳಿನೊಡನೆ ಉಳಿಯುವ ಆ ನನ್ನ ಕನಸಾವುದೊ? 
 ಮೂಡಣ ಯಾವುದೊ, ಬಡಗ ಯಾವುದೊ, 
ದಿಕ್ಕು ಮರೆತು ಅಲೆವಾಗ ಜೊತೆಗಿರುವ ಆ ಮೂರ್ತ ಚುಕ್ಕಿಯಾವುದು? 
ಕಿರಿ ವಯಸ್ಸಾವುದೊ, ಹಿರಿ ವಯಸ್ಸಾವುದೊ, 
ಇಡೀ ಜೀವನ ಜೊತೆಗಿರುವ ಸವೆಯದ ಆ ಊರುಗೋಲಾವುದೊ? 
 ಅನ್ನ ನೀಡುವ ಕೈ ಯಾವುದೊ? 
ನನಗೆ ಪ್ರೀತಿ ನೀಡುವ ಮನಸ್ಸಾವುದೊ? 
ಅನ್ನ ಪ್ರೀತಿ ಎರಡೂ ಸಿಗುವ ಆ ಸುಂದರ ಸೊಬಗ ಬದುಕಾವುದೊ? 
- ಆದರ್ಶ
