ಕಾಡುವ ನಿನ್ನ ಕಣ್ಣುಗಳ ಕಡುಗಪ್ಪು ಕತ್ತಲೆ,
ನನ್ನ ಮನದ ಆಂತರ್ಯದ ನಿತ್ಯ ಯುದ್ಧ ನೆಲೆ;
ನಿನ್ನ ಗೆಳೆತನವೇ ಈಗ ನನ್ನ ಜೀವನದ ನೌಕೆ,
ನಿನ್ನ ಸೇರಿದಾಗ ಮುಗಿಲಿಗೆ ಹಾರಿಸುವೆ ನನ್ನ ಯುದ್ಧ ಪತಾಕೆ.

ನಿನ್ನ ಮುಂದೆ ಮಂಡಿಯೂರಿ ಕುಳಿತ ನನ್ನ ಭಾವನೆಗಳೆಲ್ಲ ಈ ದಿನ ಬೆತ್ತಲೆ,
ಹುಚ್ಚೆದ್ದು ಕುಣಿಯುವೆನು ನಾನು, ಎದುರುಬದುರಿಗೆ ನೀನು ಬರುತ್ತಲೆ;
ಎದುರೇ ನಿಲ್ಲುವೆನು ಈಗ ಇಡೀ ಜಗತ್ತು ಒಟ್ಟಾಗಿ ಬರಲಿ,
ನಿನಗಾಗಿ ಗೆಳತಿ ಹೇಳಿಬಿಡುವೆನು, ಊರಲ್ಲಿ ಯುದ್ಧವೇ ನಡೆದುಬಿಡಲಿ.

ಸೂರ್ಯ ಮುಳುಗದ ಸಾಮ್ರ್ಯಾಜ್ಯವು ನನ್ನದು ಎನ್ನುತ ಬೀಗುತಲಿದ್ದೆ,
ನಿನ್ನ ಒಡನಾಟದ ಬರಸಿಡಿಲಿಗೆ ಒಂದೇ ಏಟಿಗೆ ನಾ ಬಿದ್ದೆ,
ಹೇಳದಂತೆ ನನ್ನ ಮನದೊಳಗೆ ನೀ ಬಂದು ಕುಳಿತೆ,
ನಿನ್ನೊಂದಿಗೆ ಈ ದಿನ ಗೆಳತಿ, ನಾನು ಯುದ್ಧವಿರದೆ ಸೋತೆ

- ಆದರ್ಶ