ದೊಡ್ಡೋರ ಮಾತ ನಾವು ಕೇಳಂಗಿಲ್ಲ,
ನಮ್ಮ ಮಾತು ಕೂಡ ನಮಗಾಗಲ್ಲ;
ಹಂಗೊ ಹಿಂಗೊ ನಮ್ಮದೊಂದು ಗಾಯನ,
ನಡೆದುಕೊಂಡು ಸಾಗಿದೆ ಈ ಎಡಬಿಡಂಗಿ ಜೀವನ.

ಸೂರ್ಯ ಮುಳುಗ್ತಾನೆ, ಚಂದ್ರ ಹುಟ್ತಾನೆ,
ಆ ನಡುವೆ ನಡೆಯುತ್ತೆ ನಮ್ಮ ಹುಚ್ಚು ಕುಣಿತ;
ಒಂದಕ್ಕೆ ಒಂದು ಕೂಡಲ್ಲ, ಒಬ್ಬರ ಜೊತೆಗೂ ಸೇರಲ್ಲ,
ಹಿಂಗೈತೆ ನಮ್ಮ ಬಾಳ ಗಣಿತ.

ಸೊಟ್ಟಗಿರೋದೆಲ್ಲ ನೆಟ್ಟಗೆ, ನೆಟ್ಟಗಿರೋದೆಲ್ಲ ಸೊಟ್ಟಗೆ,
ಎಡಬಿಡಂಗಿ ನಮ್ಮ ಅಂತಃಕರಣ;
ಯಾರೋ ಹಾಕಿಕೊಟ್ಟ ದಾರಿ ಸವಿ ಅಲ್ಲ ನಮಗೆ,
ನಮ್ಮಂಗೆ ನಡೆದಿದೆ ನಮ್ಮ ಎಡಬಿಡಂಗಿ ಜೀವನ.

- ಆದರ್ಶ