ನೆನ್ನೆಯಂತೆ ಇಂದು, ಇಂದಿನಂತೆ ನಾಳೆ,
ದಿನ ಬದಲಾದಂತೆ ಬದಲಾಗದು ಪ್ರಕೃತಿಯ ಹಾಳೆ.

ಸೂರ್ಯನ ಪಥವಿದು ಬದಲಾಗದೆ ನಿಂತಿಹುದು,
ಜನರು ನಲಿವರು ಯಾಕೊ ಕುರುಡು ಆಚರಣೆಯಲಿ ಮಿಂದು.
ನೆನ್ನೆಯಂತೆ ಇಂದು, ಇಂದಿನಂತೆ ನಾಳೆ,
ದಿನ ಬದಲಾದಂತೆ ಬದಲಾಗದು ಪ್ರಕೃತಿಯ ಹಾಳೆ.

ಹೊಸ ಚಿಗುರು ಮೂಡಿಲ್ಲ, ಹೂಗಳು ಅರಳಲ್ಲ,
ಗಿಡಮರಗಳಿಗಿಲ್ಲದ ಹೊಸವರುಷ ನಮಗ್ಯಾಕೆ?
ಬಂದವರು ಬಂದರು, ಹೋದವರು ಹೋದರು,
ಬಿಡುಗಡೆ ಸಿಕ್ಕಮೇಲು ಅನುಸರಣೆ ಬೇಕೆ?

ನೆನ್ನೆಯಂತೆ ಇಂದು, ಇಂದಿನಂತೆ ನಾಳೆ,
ದಿನ ಬದಲಾದಂತೆ ಬದಲಾಗದು ಪ್ರಕೃತಿಯ ಹಾಳೆ.
ಪ್ರಕ್ರುತಿಗೆ ಅಂಟಿಕೊಂಡ ಜೀವನ ನಮ್ಮದು, ಬರುವುದು ಮುಂದೆ ಯುಗಾದಿ,
ಸುತ್ತೆಲ್ಲ ಹೊಸತನ ಕಾಣುವುದು, ಆಗ ತುಳಿಯೋಣ ನಾವು ಹೊಸ ಹಾದಿ.

- ಆದರ್ಶ