ಮತ್ತೆ ಬಿಡುಗಡೆ ನನ್ನಿಂದ ನನಗೆ,
ತಂಗಾಳಿ ಬೀಸಿದೆ ಇಂದು ಸುತ್ತಲೂ ಮಳೆಯಾದಂಗೆ.
ಹಾರುವುದ ಕಲಿತಂತೆ ಮರಿ ಹಕ್ಕಿ,
ಸಂತಸಕೆ ಅಳುತಿದೆ ಮನವು ಬಿಕ್ಕಿಬಿಕ್ಕಿ.

ಯಾವುದು ಸತ್ಯ ಯಾವುದು ಮಿತ್ಯ,
ತಿಳಿಯದಂತೆ ಹಿಡಿದಿತ್ತು ನನ್ನದೇ ಸಾಂಗತ್ಯ.
ನನ್ನಿಂದ ನನಗೆ ಇಂದು ಬಿಡುಗಡೆ,
ಸಿಕ್ಕಿದ ಘಳಿಗೆಗೆ ದೂರದ ಪಯಣ ಹೊರಟಿದೆ ನನ್ನ ನಡೆ.

ನನ್ನಿಂದ ನಾನೆ ಇಂದು ಹೊರಟಿರುವೆ ದೂರಕೆ,
ಬಂಧನದ ಬದುಕಿನ ಹಿನ್ನೋಟ ನನಗಿನ್ನೇಕೆ?
ಮತ್ತೊಮ್ಮೆ ನನಗೆ ನನ್ನಿಂದಲೇ ಬಿಡುಗಡೆ,
ಹಳೆಯ ನೆನಪುಗಳೆಲ್ಲ ಈಗ ಗತದಲ್ಲೆ ಮುಳುಗಡೆ.

ಮತ್ತೆ ಬಿಡುಗಡೆ ನನ್ನಿಂದ ನನಗೆ,
ತಂಗಾಳಿ ಬೀಸಿದೆ ಈಗ ಸುತ್ತಲೂ ಮಳೆಯಾದಂಗೆ.

- ಆದರ್ಶ