ಹೊತ್ತಿ ಉರಿಯುತಿವೆ ನನ್ನ ಕಂಗಳು,
ನೆನೆದಾಗಲೆಲ್ಲ ಕನಸ ನೂರು ಅಂಕಿಗಳು.
ಮನದಿ ಭುಗಿಲೇಳುತ್ತಿವೆ ಹಿರಿಯ ಅಲೆಗಳು,
ನೆನಪಾದಾಗ ನಾ ಮರೆತ ಗುರಿಯ ದಿಕ್ಕುಗಳು.

ದಾರಿಯ ಆರಂಭದ ಹೆಜ್ಜೆಯೇ ಮರೆತಿದೆ
ಜೀವನದ ಆಗುಹೋಗುಗಳಲಿ,
ಕನಸುಗಳು ಎಂದೋ ಸೋತಿವೆ ಮರೆತ ದಾರಿಯ ಸೋಗಿನಲಿ.
ಮತ್ತೆ ನೆನಪಾಗಿವೆ ಒಂದೊಂದಾಗಿ ಕನಸುಗಳು,
ಹೊತ್ತಿ ಉರಿಯುತ್ತಿದೆ ಈಗ ಮನದ ಎಲ್ಲ ಮೂಲೆಗಳು.

ಆರಂಭವು ಈಗ ಜೀವನದ ಹೊಸ ಮೆರವಣಿಗೆ,
ನನ್ನ ಕನಸುಗಳು ಗೆಲ್ಲುವುದು, ನಾ ಸೇರುವ ಮೊದಲು ಮಣ್ಣಿಗೆ.

- ಆದರ್ಶ