ಇರುಳ ಕಳೆದು, ಬೆಳಕ ಸುರಿದು, ಮೇಲೆ ಬರುವ ಸೂರ್ಯ ಪ್ರಭಾವಿ,
ನನ್ನ ಬಾಳಿಗೆ ಬೆಳಕು ಚೆಲ್ಲುತ ಬಂದಿರುವ ಹುಡುಗಿ, ನೀನು ಕಣೆ ಮಾಯಾವಿ!

ಹುಣ್ಣಿಮೆಯ ರಾತ್ರಿಯಲಿ, ಚಂದ್ರ ಮಾಡುವ ಮೋಡಿಯಲಿ,
ಅಬ್ಬರದಿ ತೇಲಿ ಬಂದಿದೆ ಸಾಗರದಲೆಯ ಮನವಿ,
ನೀ ಬರುವ ಹೊತ್ತಲ್ಲಿ, ನನ್ನ ಮನದ ಮೂಲೆಯಲಿ,
ನಿನ್ನ ಗೆಜ್ಜೆ ತಂದ ಸ್ವರ ಹೇಳಿದೆ ಹುಡುಗಿ, ನೀನು ಕಣೆ ಮಾಯಾವಿ!

ಅರಳಿದ ಹೂವಿನ ಪರಿಮಳ, ತುಂಬುತ ನನ್ನ ಮನೆಯ ಅಂಗಳ,
ಮನೆ - ಮನ ಸೂರೆ ಮಾಡಿದ ಪ್ರಭಾವಿ,
ನಿನ್ನ ಮನದ ಗುಣ, ನನ್ನ ಎದೆಯ ಪ್ರಾಣ,
ನನ್ನ ಎದೆಯ ಬಡಿತ ನುಡಿಸುವ ಹುಡುಗಿ, ನೀನು ಕಣೆ ಮಾಯಾವಿ!

- ಆದರ್ಶ