ಯಾರ ಜೀವನ ಇಲ್ಲಿ ಶಾಶ್ವತ,
ಮುನ್ನಡೆಯಲೇ ಬೇಕು ನಾವು ಎಲ್ಲವ ತೊರೆಯುತ.
ಅಪರೂಪವಲ್ಲ ಈಗ ಜೀವನದಲ್ಲಿ ಯಾವದೇ ಘಟನೆ
ಅನುಭವಿಸುತ ಅವನೆಲ್ಲ ಸಾಗುತಿರಬೇಕು ಸುಮ್ಮನೆ,
ಹರಿಯುತ್ತಿರುವ ನದಿಯ ಮೇಲೆ ಯಾವುದು ಉಳಿವುದು ನಿಲ್ಲುತಾ?
ಯಾರ ಜೀವನದಲ್ಲಿ ಏನು ಉಳಿವುದು? ಏನೂ ಅಲ್ಲ ಇಲ್ಲಿ ಶಾಶ್ವತ.

ಯಾವ ಪಯಣದಲ್ಲಿ ಯಾರು ಜೊತೆ ಬರುವರೊ?
ಯಾವ ಗುರಿಯಲ್ಲಿ ಯಾರು ನಮ್ಮ ಸೇರುವರೊ?
ಯಾರೂ ಜೊತೆಯಲ್ಲ ನಿನಗೆ, ಎಂದಿಗೂ ನೀನು ವಿವಿಕ್ತ
ಯಾವ ದಾರಿಯಲ್ಲಿ ಯಾರ ಜೊತೆಯೋ, ಯಾರೂ ಅಲ್ಲ ಇಲ್ಲಿ ಶಾಶ್ವತ.

ಮುಗಿಲು ಏಕಾಂಗಿ, ಗಾಳಿಯೂ ಏಕಾಂಗಿ ನೋಡಲು ಇಬ್ಬರೂ ಒಡನಾಡಿಗಳು,
ಇರದಿರುವುದ ತೋರುತ ನಮಗೇ ಮೋಸ ಮಾಡುವವು ನಮ್ಮಯ ಮುದ್ದಿನ ಕಂಗಳು.
ಯಾರು ಜೊತೆಯಲ್ಲ ಇಲ್ಲಿ, ಯಾರೂ ಇರುವುದಿಲ್ಲ ನಮಗಂತ.
ಯಾವ ಕಾಲದಲ್ಲಿ ಯಾರ ಜೊತೆಯೋ, ಯಾರೂ ಅಲ್ಲ ಇಲ್ಲಿ ಶಾಶ್ವತ.

- ಆದರ್ಶ