ಅವಳ ಬಯಕೆ ನಿಶ್ಕಲ್ಮಶ ಅನುರಾಗ
ನನ್ನ ಹರಕೆ ನಿಸ್ವಾರ್ಥದ ಸಂಭೋಗ
ರಾಗ-ಭೋಗಗಳ ಸಂಯೋಗದಲಿ ನಡೆದಿದೆ ಇಂದು ವಯಸ್ಸಿನ ಉದ್ಯೋಗ!

ಏಕಾಂತದ ಹಾಡು ಅವಳಲ್ಲೂ ಇದೆ, ಹೇಳಲು ಸ್ವರವಿಲ್ಲ
ಅದನ್ನು ಕೇಳಲು ಕೌತುಕವೇ ಬೆಳೆದಿದೆ ನನ್ನ ತುಂಬೆಲ್ಲ,
ನಿತ್ಯ ಹೊಸ್ತಿಲಲಿ ದೀಪವ ಹೊತ್ತಿ ಹಿಡಿದಳು ನನ್ನ ಆಗಮನಕೆ
ಆಗಸಕೆ ಬೆಂಕಿ ಹೊತ್ತಿತು, ತಾಕಲು ಅವಳ ಕಂಗಳು ನನ್ನ ಜೀವಕೆ!

ಹೊರಟಿದೆ ಜೋಡಿಯ ಪ್ರೀತಿಯ ತೇರು
ಎಳೆಯುತ ಸಾಗಬೇಕು ಸರಾಗವಾಗಿ ಇಬ್ಬರು,
ಅವಳ ಬಯಕೆ ನಿಲ್ಲದ ಅನುರಾಗ
ನನಗೆ ಅದುವೇ ಜೀವನದ ವೈಭೋಗ!

- ಆದರ್ಶ