ನಗುತಿರುವ ಮೊಗದ ಹಿಂದೆ ಸಾಗುತಿರುವುದು ನೋವಿನ ಮೆರವಣಿಗೆ
ವಿಧಿಯೇಕೆ ನಿಲ್ಲಿಸದೆ ನೀನು ನಡೆಸುತಿರುವೆ ನಿನ್ನ ಬರವಣಿಗೆ
ಊಹಿಸಲೇ ಆಗದು ನಮಗೆ ಮುಂದಿನ ಹೆಜ್ಜೆಯ ಸಪ್ಪಳವ
ಸ್ಬಲ್ಪವಾದರೂ ತಗ್ಗಿಸು ನಮ್ಮ ಮೇಲೆ ಆಗುವ ನಿನ್ನ ಕ್ರೂರ ಪ್ರಭಾವ
ಆಗಾಗ ಬಂದು ಕಿರುಕುಳ ಕೊಟ್ಟು ಹೋಗುತ್ತಿದ್ದರೂ ನೋವು
ನಗುತಲೇ ನೋವುಗಳ ಮರೆಸುತಿಹುದು ನಮ್ಮ ಮೊಗವು, ಈ ನಮ್ಮ ಮೊಗವು!


– ಆದರ್ಶ