ಎಲ್ಲರೂ ಇದ್ದು ಒಂಟಿಯಾಗುವ ಚಂದಕೆ ಬಂಧಗಳನು ಬೆಳೆಸಬೇಕೆ
ನನ್ನೊಡನೇಯೆ ಬಾಳುವ ನನಗೆ ಈಗ ಒಂಟಿಯಾಗುವ ಬಯಕೆ,
ತಿಳಿನೀಲಿ ಆಗಸದಿ ಹಾರುವ ಒಂಟಿ ಹಕ್ಕಿಯಂತೆ ಈಗ ನಾನು
ನನ್ನೆತ್ತರಕೆ ತಾನು ಹಾರಲಾಗದೆಂದು ಸುಮ್ಮನೆ ತೇಲಾಡುತಿದೆ ಬಾನು,
ಕೈ ಚಾಚಿ ನಿಂತ ಜನರಿಗೆ ನಾನು ಸಿಗಲಾರದ ದಿಗಂತ
ನನ್ನನೇ ದೂಡುತ ಸೇರಿರುವೇ ಈಗ ಯಾರಿಗೂ ಸಿಗದ ಹಂತ,
ತಿಳಿನೀಲಿ ಆಗಸದಿ ಹಾರುತಿರುವ ಹಕ್ಕಿ ಈಗ ನಾನು
ಯಾರ ಕೈಗೂ ಸಿಗದಂತೆ ಹಾರಾಡುವೆನು!

– ಆದರ್ಶ