ಯಾರ ದಾರಿಯ ಹೆಜ್ಜೆ ಗುರುತಿದು ನಾನು ನೋಡುತ ಸಾಗಿರುವೆ
ನನ್ನ ಹೆಜ್ಜೆಯ ಪಥವೆ ಇಂದು ನನಗೆ ತಿಳಿಯದೆ ಬದಲಾಗಿವೆ,
ದಾರಿಯ ಕೊರೆಯುತ ಸಾಗುವ ಧೈರ್ಯವು ಎತ್ತ ಹೋಯಿತೋ ಏನೊ
ಕಾಣದೂರಿನ ಕನಸ ಕಾಣುವ ಇಂಗಿತವೀಗ ಇಲ್ಲವಾಯಿತೇನು,
ಅನ್ಯರು ತೋರುವ ಹಾದಿಯಲ್ಲಿ ಇಂದು ಬಾರದಾಗಿದೆ ಸೊಗಸು
ಮತ್ತೆ ಇಂದು ನೆನಪಾಗಿದೆ ನನಗೆ ನಾ ಎಂದೋ ಕಂಡ ಕನಸು!

-ಆದರ್ಶ