ಕಡೆ ಸಾಲಿನ ಹುಡುಗರು
ಯಾವ್ದಕ್ಕು ನಡುಗರು
ಊರ್ ಮೇಲೆ ಊರ್ ಬಿದ್ರು ತಲೆ ಕೆಡಿಸಿಕೊಳ್ಳರು;

ಕಡೆ ಸಾಲಿನ ಹುಡುಗರು
ಪಾಠಾನೇ ಕೇಳರು
ಆದ್ರೂನು ಎಕ್ಸಾಮಲ್ ಹಾಳೆ ತುಂಬ ಬರೆವರು;

ಕಡೆ ಸಾಲಿನ ಹುಡುಗರು
ತುಂಬಾನೆ ಮುಗ್ಧರು
ಆದ್ರೂನು ಮಾತಲ್ಲಿ ಸಂಸ್ಕೃತಾನೇ ಬಳಸುವರು;

ಕಡೆ ಸಾಲಿನ ಹುಡುಗರು
ಕೊನೆಯಲ್ಲೇ ಕೂತರೂ
ಬಾಳಲ್ಲಿ ಮುಂದೊಮ್ಮೆ ಉದ್ಧಾರ ಆಗುವರು!

- ಆದರ್ಶ