ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಅನುಭವ : ಗೋಧಿ ಬಣ್ಣ ಸಾಧಾರಣ ಮೈಕಟ್ಟು
ನನ್ನ ವಿದ್ಯಾಭ್ಯಾಸದ ಬಹುಪಾಲು ಭಾಗ ಕನ್ನಡ ಮಾಧ್ಯಮದಲ್ಲೇ ಆಗಿದ್ದರೂ, ಅತ್ಯಂತ ಕಡಿಮೆ ಅವಧಿಯ ಸಂಗಾತಿ ಇಂಗ್ಲಿಷ್ ನಲ್ಲೇ ಹೆಚ್ಚಾಗಿ fb status ಗಳ ಮೂಲಕ, ದೊಡ್ಡ ದೊಡ್ಡ ಪದಗಳ ರಾಶಿ ಹಾಕಿ, ದೊಡ್ಡ ಚಿತ್ರ ವಿಮರ್ಶಕನೇನೋ ಎಂಬ ಹುಂಬತನದಲ್ಲಿರುತ್ತಿದ್ದ ನನಗೆ ಏಕೋ ಇಂದು ಇಂಗ್ಲಿಷ್ ವಾಂತಿ ಮಾಡಿ ನಾಲ್ಕೈದು ಸಾಲಲ್ಲಿ ಮುಗಿಸಿದರೆ ಢೋಂಗಿಯಾಗುತ್ತೇನೇನೋ ಎಂಬ ಅನುಮಾನ ಕಾಡಹತ್ತಿತು, ಅದಕ್ಕಾಗಿಯೇ ಮಾತೃಭಾಷೆ ಕನ್ನಡದಲ್ಲೇ, ಭಾವನೆಗಳಿಗೆ ಮೋಸ ಮಾಡದೇ ಅನುಭವವನ್ನು ಬಿಚ್ಚಿಡುವ ಯತ್ನ...
-
ಇರದಾಗಲೇ ಇರುವುದು ಖುಷಿ
ಕಾಲೇಜಿನಲ್ಲಿ ಇರುವಾಗ ಜೇಬಿನಲ್ಲಿ ಒಂದು ಮೊಬೈಲು, ಕಿವಿಯಲ್ಲೊಂದು ಇಯರ್ ಫೋನು ಇದ್ದರೆ ಅದೊಂದು ರೀತಿ ‘ಸ್ಟೈಲ್’ ಆಗಿತ್ತು. ತುಸು ಹೆಚ್ಚೇ ಹಾಡುಗಳ ಕೇಳುವ ಮನಸಿದ್ದರಿಂದ ಸದಾಕಾಲ ನನ್ನ ಕಿವಿಯಲ್ಲಿ ಇಯರ್ ಫೋನು ಇರುತ್ತಿತ್ತು. ಆಗೆಲ್ಲ ನನಗೆ ಮನೆಯಿಂದ ಕಾಲೇಜಿಗೆ ಬಸ್ಸಿನಲ್ಲಿ ಹೋಗುವಾಗ ಹಾಡುಗಳ ಕೇಳುವ ಅಭ್ಯಾಸವಿತ್ತು. ನನ್ನೊಡನೆ ನನ್ನ ಗೆಳೆಯ ಸಹ ಮನೆಯಿಂದ – ಕಾಲೇಜು, ಕಾಲೇಜಿನಿಂದ – ಮನೆಗೆ ಒಟ್ಟಿಗೆ ಓಡಾಡುವ ಪರಿಪಾಟವಿತ್ತು. ನನ್ನ ಗೆಳೆಯನ ಬಳಿಯೂ ಒಂದು...
-
ಯುದ್ಧ ಶಾಂತಿ!
ನೂರಾರು ಮನೆಗಳು, ನೂರಾರು ಮನಗಳು ಒಂದೊಂದು ಮನೆಯಲ್ಲೂ ಒಂದೊಂದು ರೀತಿಗಳು ನೂರಾರು ದೇಶಗಳು, ನೂರಾರು ಭಾಷೆಗಳು ಒಂದೊಂದು ದೇಶದಲ್ಲೂ ಒಂದೊಂದು ನೀತಿಗಳು; ನೂರಾರು ಮನೆ, ನೂರಾರು ಮನ ನೂರಾರು ದೇಶ, ನೂರಾರು ಭಾಷೆ ಎಲ್ಲಕ್ಕೂ ಇರುವುದು ಒಂದೇ ಭೂಮಿ! ಗೆರೆ ಎಳೆದು ಬೇರಾಗಿ ಭೂಮಿ ಒಡೆಯಬೇಕೆ? ಜೊತೆಯಾಗಿ ಹೊಡೆದಾಡಿ ದೂರಾಗಬೇಕೆ? ಯುದ್ಧದಿ ಶಾಂತಿಯ ಬಯಕೆ ಯಾಕೆ? ಸಮಾಧಿಯ ಮೇಲೆ ಹೂದೋಟ ಬೇಕೆ? – ಆದರ್ಶ
-
ಬಿಸಿಲು ಸುಡುವಾಗ
ಎಸಿ ಅಡಿಯಲ್ಲಿ ಕುಂತವನಿಗೇನು ಗೊತ್ತು ಬಿಸಿ ಶಾಖ ಬಿಸಿ ಮುಟ್ಟದು ಮನುಜನಿಗೆ ಅಂಡು ಸುಡುವ ತನಕ, ಸುತ್ತೆಲ್ಲ ಮರಗಳು ಬೇಗೆಯಲಿ ಬಸವಳಿದಿವೆ ಆದರ್ಶಗಳೆಲ್ಲ ಮಾನವನ ಕಿಸೆಯಲ್ಲೆ ಹೊರ ಬಾರದೆ ಉಳಿದಿವೆ, ಆಡುವ ಮಾತಲ್ಲಿ ಎಲ್ಲರೂ ಧೀರರೇ, ಸರಿ ಸಮಯ ಬಂದಾಗ ಮರ ಬೆಳೆಸಲು ಯಾರಾದರು ಬಂದರೆ? ಕುಡಿಯುವ ನೀರಿಲ್ಲದಾಗ ಕಾಡುವ ಅರಿಕೆಯು ಭೀಕರ ಬದುಕುವ ಕಷ್ಟ ನೀಡದೆ ಇಂದು ಸಾವು ತೋರುತಿದೆ ಮಮಕಾರ, ಎಸಿ ಅಡಿಯಲ್ಲಿ ಕುಂತವನಿಗೇನು ಗೊತ್ತು ಬರಗಾಲದ...
-
ನಾನಾರೆಂಬುದು ನಾನಲ್ಲ
ಅವನು ಬೆಳಿಗ್ಗೆ ಎದ್ದೇಳುವಾಗಲೇ ಎಂಟು ಗಂಟೆ ಆಗಿತ್ತು. ಹತ್ತು ಗಂಟೆಗೆ ಮೀಟಿಂಗ್ ಬೇರೆ ಇತ್ತು.ತಾನೇ ಕರೆದಿರುವ ಮೀಟಿಂಗ್ ಆದ್ದರಿಂದ ಹೋಗದೆ ಇರುವ ಹಾಗೆ ಇರಲಿಲ್ಲ. ಕಂಪನಿಗೆ ಅವನೆ ಬಾಸ್ ಬೆರೆ. ಕಾಫಿ ತಂದ ಹೆಂಡತಿಗೆ “ಬೇಗ ಎಬ್ಬಿಸೊಕೆ ಆಗಲಿಲ್ವ” ಅಂತ ರೇಗುತ್ತಾನೆ. ಪ್ರತಿ ದಿನ ತಾನಾಗೆ ಅಲಾರಂ ಇಟ್ಟುಕೊಂಡು ಎದ್ಹೆಳುತ್ತಿದ್ದವನು ಇವತ್ತು ಬೇಕು ಅಂತಲೆ ಮಲಗಿರಬಹುದು ಎಂದುಕೊಂಡು ಆಕೆ ಕೂಡ ಸುಮ್ಮನಿದ್ದಳು.ಅದನ್ನೆ ಅವನಿಗೆ ಹೇಳಲು ಭಯವಾಗಿ ಸುಮ್ಮನಾಗುತ್ತಾಳೆ. ಇವನು ಗಡಿಬಿಡಿ...