• ಕರೆಯೋಲೆ

    ಹದವಾದ ಜೀವನದಲ್ಲಿ ಮುದ ನೀಡುವ ಬಂಧನಕೆ, ಮದುವೆ ಜೀವನವೇ ಇನ್ನು ಜೋಡಿ ಮನದ ಹರಕೆ! ನಿಮ್ಮ ಆಗಮನವೇ ಚಪ್ಪರ, ಶುಭ ಹರಕೆಯೇ ಮಂಟಪ, ನಿಮ್ಮ ಜೊತೆಯೇ ಸಾಗಬೇಕು ನಮ್ಮ ಮದುವೆಯ ಸಡಗರ! ನಿಮ್ಮ ನಡುವೆಯೇ ಶುರುವಾಗಲಿ ನಮ್ಮ ಹೊಸ ಪಯಣ ಆ ಶುಭ ದಿನಕೆ ಬಯಸಿಹೆವು ನಿಮ್ಮಯ ಆಗಮನ! - ಆದರ್ಶ


  • ಹಕ್ಕಿಗಳು

    ಬೆನ್ನು ಕೊಟ್ಟು ತಿರುಗಿ ಕುಳಿತ ಹಕ್ಕಿಗಳು ಈಗ ಅಲೆಮಾರಿ, ಮನಸ್ಸಿನ ಆಟದಲ್ಲಿ ಎರಡೂ ಸಿಲುಕಿವೆ ಎಲ್ಲವ ತಿಳಿದೂ ಯಾಮಾರಿ ಅಂಟಿಕೊಂಡ ಬೆನ್ನಿನಲಿ ಬರೆದಿವೆ ತುಂಬಿ ಬಂದ ಮಾತುಗಳ, ತಿರುಗಿ ಓದದೆ ಮುಖಪುಟವನು, ಬರಿ ನೀಲಾಕಾಶವೇ ತುಂಬಿದೆ ಕಂಗಳ. ಒಂದೇ ಎತ್ತರದಿ ಹಾರಲು ಬಾರದೆ ಕಾಣುತಿದೆ ಶೂನ್ಯವು ಎರಡರ ನಡುವಲಿ, ಒಂದೇ ಬಾರಿಗೆ ರೆಕ್ಕೆಯ ಬಡಿಯದೆ ಉಳಿದವು ಎರಡೂ ಅಂತರದಲಿ. ಬೆನ್ನು ಮಾಡಿ ಕುಳಿತ ಹಕ್ಕಿಗಳು ಈಗ ಒಂಥರಾ ಅಲೆಮಾರಿ, ಸಮರಸವಿರದೆ...


  • ಗುಟ್ಟು

    ಎಲ್ಲರಿಂದ ಜೋಪಾನವಾಗಿ ಬಚ್ಚಿಟ್ಟ ಗುಟ್ಟು, ಇರುವುದಾದರೂ ಹೇಗೆ ನಾನು ನಿನ್ನನು ಕೊಟ್ಟು? ಹಳೆಯ ಪೋಲಿ ಕನಸೆಲ್ಲ ಹಿತ್ತಲಲ್ಲೇ ಬಿಟ್ಟು, ಹಿಡಿದಿರುವೆ ಬರಿಯ ನಿನ್ನ, ಸಮಯವ ಬದಿಗಿಟ್ಟು! ಜಾತ್ರೆಯಲಿ ಕಿರುಚಿದರೂ ಕೇಳದ ಮಾತಿಗೆ ಬಂದಂತಿದೆ ಈಗ ಮಾರ್ದನಿಯ ಮುತ್ತಿಗೆ, ನಡುರಾತ್ರಿ ಸುತ್ತಲೂ ಯಾರೂ ಇರದ ಹೊತ್ತಿಗೆ ಗಾಳಿಯೇ ಮೌನವಾಗಿದೆ ನೀ ಹೇಳುವ ಗುಟ್ಟಿಗೆ! ಯಾರಿಗೂ ಹೇಳದೆ ಬಂದ ಪ್ರೀತಿಗೆ ಗುಟ್ಟಾಗಿ ನೀಡಿರುವೆ ಮುದ್ದಾದ ದೇಣಿಗೆ, ನನಗೂ ಸಿಗದಂತೆ ಉಳಿದಿರುವ ಗುಟ್ಟು ನೀನಾಗಿರು...


  • ವಾಯುಭಾರ

    ಬಂದರೆ ನೀನು ನನ್ನೆಡೆಗೆ ನುಗ್ಗುತ, ನನ್ನ ಸುತ್ತೆಲ್ಲ ಒಮ್ಮೆಗೆ ವಾಯುಭಾರ ಕುಸಿತ. ಹರಿದಾಗ ನಿನ್ನ ಪರಿಮಳ ನನ್ನ ಸುತ್ತ, ಇಡೀ ಪ್ರಪಂಚಕೆ ಆದಂತಾಗಿದೆ ಈಗ ವಾಯುಭಾರ ಕುಸಿತ! ಕನಸಲ್ಲಿ ಬರಲು ನೀ ನನ್ನ ಮನವ ಸೇರುತ, ನಿದಿರೆಯಲ್ಲೇ ಉಂಟಾಗಿದೆ ಜೀವದ ವಾಯುಭಾರ ಕುಸಿತ. ಮರಣದಲ್ಲಿ ಬಂದುಳಿಸಿದೆ ನಿನ್ನ ಸ್ನೇಹವ ತೋರುತ, ಬಿರುಗಾಳಿಯೇ ತಬ್ಬಿ ಮಲಗಿದೆ ಇಲ್ಲಿ ನನ್ನ ಮನವ, ಉಂಟಾಗಿದೆ ಈಗ ನನ್ನ ಜಗದ ವಾಯುಭಾರ ಕುಸಿತ! ತಂಗಾಳಿಯು ತೇರಲ್ಲಿ...


  • ಸಣ್ಣ ಉಳಿತಾಯ

    ಮನುಷ್ಯನ ಉಗಮವಾದಾಗಿನಿಂದ ನೀರು ಬರೀ ಬಳಕೆಯ ವಸ್ತುವಾಗಿಯೇ ಉಳಿದಿದೆ ಹೊರತು, ಉಳಿಸಬೇಕಾದ ವಸ್ತುವೆಂದು ಅರಿತವರು ತೀರಾ ಕಡಿಮೆ. ಇತ್ತೀಚಿಗಷ್ಟೇ ನೀರನ್ನು ಉಳಿಸಬೇಕು, ಮತ್ತದರ ಬಳಕೆ ಕಡಿಮೆ ಮಾಡಬೇಕು ಎಂಬ ಆಲೋಚನೆ ಹೊರ ಬಂದಿದ್ದು. ಈಗ ಬಳಸುತ್ತಿರುವ ವೇಗದಲ್ಲಿ ನೀರನ್ನು ಮುಂದೂ ಬಳಸುತ್ತಿದ್ದರೆ, ಇನ್ನು ಕೆಲವೇ ಶತಮಾನಗಳಲ್ಲಿ ಇಡೀ ಭೂಮಿಯ ಜನರು ಕುಡಿಯುವ ನೀರಿಲ್ಲದೆ ಸಾಯುವ ಸ್ಥಿತಿಯ ತಲುಪಬಹುದು. “ಜೀವನಾನ ಇವತ್ತು ಅನುಭವಿಸಬೇಕು ಅಂತ ನಮ್ಮ ಜನ ತಮ್ಮ ಮುಂದಿನ ತಲೆಮಾರಿಗೂ...