ಓದುಗರು ಇದ್ದಾರೆಂದು ನಾವು ಬರೆಯಲು ಶುರು ಮಾಡಲಿಲ್ಲ. ಬರಿಬೇಕು ಅನ್ನಿಸ್ತು ಬರೆದ್ವಿ. ಆಮೇಲೆ ಓದುಗರು ಬೇಕು ಅನ್ನಿಸ್ತು. ಇದ್ದ ಗೆಳೆಯರನ್ನು ಹುಡುಕಿಕೊಂಡು ಹೋಗಿ ಪಟ್ಟು ಹಿಡಿದು ಕೂರಿಸಿ ಓದೋಕೆ ಕೊಟ್ಟೆವು. ಕೆಲವರು ಚೆನ್ನಾಗಿದೆ ಅಂದರೆ ಇನ್ನು ಕೆಲವರು “ಇನ್ನು ಮುಂದೆ ಇಂಥಾದ್ದೆಲ್ಲಾ ತಂದು ಓದು ಅಂದ್ರೆ ಚೆನ್ನಾಗಿರಲ್ಲ” ಅಂತ ಬಯ್ಯೋರು. ಯಾವ ಬೈಗುಳಗಳೂ ನಮ್ಮನ್ನ ಬರವಣಿಗೆಯಿಂದ ದೂರ ತಳ್ಳಲಿಲ್ಲ. ಬರೆಯೋದು ನಮ್ಮ ಇಷ್ಟದ ಕೆಲಸ, ಬರಿತಾನೇ ಇರ್ತಿವಿ. ಓದೋದು ಓದುಗರ ಕಷ್ಟ…!!! ಈ ಬ್ಲಾಗ್ ಶುರು ಮಾಡ್ತಿರೋದು ಓದುಗರ ಸಂಖ್ಯೆ ಹೆಚ್ಚಿಸಿಕೊಳ್ಳೋಕೆ, ನಮ್ಮ ಬರಹವನ್ನ ಜನರಿಗೆ ತಲುಪಿಸೋಕೆ. ಈ ಬ್ಲಾಗಿನಲ್ಲಿ ಬರೆಯೋದೆಲ್ಲ ನಮ್ಮ ಜೀವನಕ್ಕೆ ಸಿಕ್ಕ ಅನುಭವ, ಒಡನಾಡಿಗಳು, ಸುತ್ತಲ ಪರಿಸರ ಕೊಟ್ಟ ವಿಷಯ. ನಾವು ಬರೆದಿದ್ದೆಲ್ಲ ನೀವು ಒಪ್ಪಬೇಕೆಂದೇನೂ ಇಲ್ಲ, ಯಾಕೆಂದರೆ ನಮ್ಮ ಮಾತುಗಳನ್ನ ಕೆಲವೊಮ್ಮೆ ನಾವೇ ಒಪ್ಪಲ್ಲ!

ಇಲ್ಲಿಗೆ ಸಾಕು, ಮುಂದೆ ನಮ್ಮ ಬರವಣಿಗೆಯ ಮೂಲಕ ನಿಮ್ಮ ಮುಂದೆ ಬರುತ್ತೇವೆ!