• ಚರಿತ್ರೆ

    ಇತಿಹಾಸ ಹೇಳುವ ಸತ್ಯವಾದರೂ ಏನು? ಇತಿಹಾಸ ಬರೆದ ಸತ್ಯವಂತನು ಯಾರು? ಸುಳ್ಳನ್ನು ಸತ್ಯವೆಂದು ಹೇಳುವ ಚರಿತೆಯ ಸುಳ್ಳೆಂದು ಪ್ರಮಾಣಿಸಿ ಹೇಳುವರಾರು? ಸತ್ಯವ ಹುದುಗಿಟ್ಟು, ಸುಳ್ಳನ್ನು ಸ್ವರ ಮಾಡಿ ಹಾಡುವ ಚರಿತೆಯ ರಾಗದಿ ತಪ್ಪು ಹುಡುಕುವವರು ಯಾರು? ಸುಳ್ಳಾದ ಸುಳ್ಳನ್ನು, ಸತ್ಯವಾದ ಸತ್ಯವನ್ನು, ಬೆರೆಸಿ ಕಿರುಚಾಡಿ ಹೇಳುವುದು ಚರಿತೆ,ಮರೆಮಾಚಿದ ಸತ್ಯವನ್ನು ಸುಳ್ಳಿಂದ ಹೊರತೆಗೆದು ಬೆತ್ತಲೆ ಸತ್ಯವ ನೋಡಲಾದೀತೇ?ಹೂವಿನ ನಡುವಲ್ಲಿ ಮುಳ್ಳೊಂದು ಬೆರೆತಂತೆ, ಕಣಿವೆಯಲಿ ಅಪರಿಚಿತ ಮಾರ್ದನಿಯು ಕೇಳುವಂತೆ, ಕತ್ತಲೆಯ ಆಗಸದಲಿ ತಾರೆಗಳು...


  • ನಾನು ನನ್ನ ಕನಸು

    ನನ್ನ ಮಗು, ಹುಟ್ಟಿದ್ದು ನನ್ನಾಕೆ ಹುಟ್ಟಿದ ದಿನವೇ. ಎಷ್ಟು ಭಯ ಇತ್ತು ಎದೆಯಲ್ಲಿ ನನ್ನಾಕೆಯ ಬಗೆಗೆ, ಮುದ್ದಿನ ಹೆಂಡತಿ. ಆ ಹೊಟ್ಟೆಯ ಭಾರ ಹೊತ್ತು ತಿರುಗಾಡಲು ಕಷ್ಟ ಪಡುತಿದ್ದಳು ಆಕೆ. ಸಾಧಾರಣ ಪ್ರಸವ ಬೇಡ ಅನ್ನೋದು ನನ್ನ ಕಾಳಜಿಯ ಅಭಿಪ್ರಾಯವಾದ್ರೆ, ಅವಳದ್ದು ಅದೇ ಬೇಕು ಅನ್ನೋ ಮಹಾದಾಸೆಯ ವಾದ. ಕೊನೆಗೂ ಗೆದ್ದದ್ದು ಅವಳೆ. ಆಸ್ಪತ್ರೆಯಲ್ಲಿ ಕಳೆದ ಆ ಕ್ಷಣಗಳು, ಅವಳು ಕಿರುಚೋದನ್ನ ಕೇಳಿ ಆಗುತಿದ್ದ ಚಡಪಡಿಕೆ ವ್ಯಕ್ತ ಪಡಿಸೋಕೆ ಮಾತು...


  • ಗಂಟು ಮೂಟೆ ಕಟ್ಟು ಗುರು

    ಗಂಟುಮೂಟೆ ಕಟ್ಟು ಗುರು, ಜೀವನ ಯಾಕೊ ಬೇಜಾರು ಹುಡುಕು ಬೇರೆ ಏನಾದ್ರು, ಮುಂದೆ ಯಾವ್ದು ಹೊಸ ಊರು.. ತೋರು ಬೆರಳು ತೋರಿಸಿದ್ರು, ಇದೆ ದಾರಿ ಸರಿ ಕಣ್ರಪ್ಪ, ಹೋದವ್ನ್ ಯಾರು ಅಡ್ರೆಸ್ಗಿಲ್ಲ, ಸ್ವಲ್ಪ ನೋಡ್ಕೊಂಡು ಹೋಗ್ರಪ್ಪ... ರಾಜದಾರಿ ಅಲ್ದೆ ಇದ್ರೂ ಪರವಾಗಿಲ್ಲ, ಸರ್ವಿಸ್ ರೋಡೆ ಬೆಟರ್ರು, ಯಾವನೋ ತೋರ್ಸಿದ ಮಾರ್ಗಕ್ಕಿಂತ, ನಮ್ ದಾರಿಲೇ ಇರೋದು ಖದರ್ರು...... ದೇವರು ಕೂಡ ಸಿಕ್ಬೋದು, ನಮ್ಗೆ ನಾವೇ ಸಿಗೋದು ಡೌಟು, ಹುಡುಗೀನ್ ಬೇಕಾದ್ರು ತಿರುಗ್ಸಬೋದು,...


  • ಪ್ರೀತಿ ಬಂದಿತ್ತೆ

    ಹೂವ ಚೆಲ್ಲಿ, ತಿಲಕವಿಟ್ಟು, ಆರತಿ ಮಾಡಿ ಬಾ ಎಂದಾಗ ಪ್ರೀತಿ ಬಂದಿತ್ತೆ? ಒಣಗಿದ ನೆಲದ ಮೇಲೆ ಬೀಸುವ ಗಾಳಿಯು ಮುಂಗಾರನ್ನು ಎಂದಾದರೂ ತಂದಿತ್ತೆ? ಬೇಗೆಯಲ್ಲಿ ಭಾವನೆ ಕರಗಬೇಕು, ಆವಿಯಾಗಿ ಮನಮುಗಿಲ ಮುಟ್ಟಬೇಕು; ತಡೆಗಟ್ಟಿ ಹಿಡಿದ ಕಪ್ಪಾದ ಮುಗಿಲೇ ಮಳೆಯಾಗಿ ಸುರಿವುದು, ಗುಣಗಳ ಅರಿತ ಸೊಂಪಾದ ಮನದಲ್ಲೇ ಪ್ರೀತಿ ಚಿಗುರುವುದು! ಮದುವೆ ಆಗಿ ಬಹಳಷ್ಟು ವರುಷ ಜೊತೆಗಿದ್ದೂ ಸಹ ಒಬ್ಬರೊನ್ನೊಬ್ಬರ ಅರಿಯದೆ, ಕಷ್ಟ ಪಟ್ಟು ಜೊತೆಗಿರುವ ಹಾಗೆ ಇದ್ದವರ ನೋಡಿದಾಗ ಈ...


  • ಕಗ್ಗತ್ತಲು

    ಬೆಳಕನು ಆವರಿಸುವ ಕಗ್ಗತ್ತಲು, ಕರೆದುಕೊಂಡು ಸಾಗಿದೆ ಕಾಣದ ಹಾದಿಯಲಿ, ಇಂದು ನಮ್ಮ ಗುರಿಯೇ ಬದಲು! ಶುರುವಾದ ದಾರಿಯೂ ಈಗ ಇರದಾಗಿದೆ, ಆ ದಾರಿಗೂ ಏರಿತೇ ಅಮಲು? ನಡುವಾದ ದ್ವೀಪದಲ್ಲಿ ನಿಂತು ನೋಡುತಿರೆ ಸುತ್ತಲೂ ಆವರಿಸಿದೆ ಭೀಕರ ಅಲೆಗಳ ನರ್ತನ ಕಾಲಿಡಲು ಆಗುವುದೇ? ಈಜಲು ಇಳಿಯಬಹುದೇ? ತೇಲುವುದೇ ಈ ಸಣ್ಣದಾದ ಜೀವನ? ಯುಗಗಳಿಂದ ಕತ್ತಲೆಯಲ್ಲಿ ಮರೆಯಾದವು ಅದೆಷ್ಟೋ ಬದುಕುಗಳು, ಕಾಣದ ಹಾದಿಯ ಕಟುವಾದ ಪಯಣದಲಿ ಕಣ್ಮುಚ್ಚಿದವು ಬೆಳಕೇ ಕಾಣದ ಕಣ್ಣುಗಳು ಸೋತಿದೆ...